Please enable javascript.Currency Ban,ನೋಟು ರದ್ದತಿಗೆ 1 ತಿಂಗಳು: ಡಿಜಿಟಲ್ ಪಾವತಿಗೆ ಒತ್ತು, ಪೆಟ್ರೋಲ್, ಡೀಸೆಲ್, ಟಿಕೆಟ್ ಅಗ್ಗ - One month post-demonetisation, Finance Minister Arun Jaitley announces slew of measures to promote digital payments - Vijay Karnataka

ನೋಟು ರದ್ದತಿಗೆ 1 ತಿಂಗಳು: ಡಿಜಿಟಲ್ ಪಾವತಿಗೆ ಒತ್ತು, ಪೆಟ್ರೋಲ್, ಡೀಸೆಲ್, ಟಿಕೆಟ್ ಅಗ್ಗ

ಟೈಮ್ಸ್ ಆಫ್ ಇಂಡಿಯಾ | 8 Apr 2024, 12:29 pm
Subscribe

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೆಟ್ರೋಲ್/ಡೀಸೆಲ್ ಖರೀದಿಸುವವರಿಗೆ ಶೇ.0.75ರಷ್ಟು ರಿಯಾಯಿತಿ ಘೋಷಿಸಿರುವ ಕೇಂದ್ರ ಸರಕಾರ, ಡಿಜಿಟಲ್ ವಿಧಾನದ ಮೂಲಕ ಉಪನಗರೀಯ ರೈಲು ಪ್ರಯಾಣಕ್ಕೆ ಮಾಸಿಕ ಹಾಗೂ ಸೀಸನಲ್ ಟಿಕೆಟ್ ಖರೀದಿಸುವವರಿಗೆ ಶೇ.0.5 ರಿಯಾಯಿತಿ ಘೋಷಿಸಿದೆ.

Arun Jaitley
ಹೊಸದಿಲ್ಲಿ: ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೆಟ್ರೋಲ್/ಡೀಸೆಲ್ ಖರೀದಿಸುವವರಿಗೆ ಶೇ.0.75ರಷ್ಟು ರಿಯಾಯಿತಿ ಘೋಷಿಸಿರುವ ಕೇಂದ್ರ ಸರಕಾರ, ಡಿಜಿಟಲ್ ವಿಧಾನದ ಮೂಲಕ ಉಪನಗರೀಯ ರೈಲು ಪ್ರಯಾಣಕ್ಕೆ ಮಾಸಿಕ ಹಾಗೂ ಸೀಸನಲ್ ಟಿಕೆಟ್ ಖರೀದಿಸುವವರಿಗೆ ಶೇ.0.5 ರಿಯಾಯಿತಿ ಘೋಷಿಸಿದೆ.

500 ಹಾಗೂ 1000 ರೂ. ಹಳೆಯ ನೋಟುಗಳನ್ನು ನಿಷೇಧಿಸಿ ಒಂದು ತಿಂಗಳಾದ ಹಿನ್ನೆಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ದೇಶದ 4.32 ಕೋಟಿ ಮಂದಿಗೆ ಶೀಘ್ರದಲ್ಲೇ ನಬಾರ್ಡ್, ರುಪೇ ಕಾರ್ಡುಗಳನ್ನು ವಿತರಿಸಲಿದೆ ಎಂದರು.

ಅಲ್ಲದೆ, ಡಿಜಿಟಲ್ ಮೂಲಕ ಪಾವತಿಸಲಾಗುವ ಸಾಮಾನ್ಯ ವಿಮೆಗೆ ಶೇ.10, ಜೀವ ವಿಮೆಗೆ ಶೇ.8ರಷ್ಟು ರಿಯಾಯಿತಿ ನೀಡಲಾಗುತ್ತದೆ. ರೈಲ್ವೇ ಟಿಕೆಟುಗಳನ್ನು ಡಿಜಿಟಲ್ ರೂಪದಲ್ಲಿ ಕಾಯ್ದಿರಿಸುವ ಪ್ರಯಾಣಿಕರಿಗೆ 10 ಲಕ್ಷ ರೂ. ವಿಮಾ ರಕ್ಷಣೆ ಒದಗಿಸಲಾಗುತ್ತದೆ ಎಂದು ಜೇಟ್ಲಿ ಪ್ರಕಟಿಸಿದರು.

ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಇತರ ಪ್ರಮುಖ ಅಂಶಗಳು:
* ಟೋಲ್ ಬೂತ್‌ಗಳಲ್ಲಿ ಬಳಸಲೆಂದು ಡಿಜಿಟಲ್ ರೂಪದಲ್ಲಿ ಆರ್‌ಎಫ್ಐಡಿಗೆ ಹಣ ಪಾವತಿಸುವವರಿಗೆ ಶೇ.10 ರಿಯಾಯಿತಿ.

* ಆನ್‌ಲೈನ್ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ರೈಲ್ವೇ ನಿಲ್ದಾಣಗಳಲ್ಲಿ ವಸತಿ, ಊಟ ಹಾಗೂ ವಿಶ್ರಾಂತಿ ಶುಲ್ಕದಲ್ಲಿ ಶೇ.5ರಷ್ಟು ರಿಯಾಯಿತಿ.

ಹಲವು ಉಪಕ್ರಮಗಳನ್ನು ಘೋಷಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಭಾರತವನ್ನು ನಗದು-ರಹಿತ ಸಮಾಜವಾಗಿ ಪರಿವರ್ತಿಸುವತ್ತ ಪ್ರಮುಖ ಹೆಜ್ಜೆ ಇರಿಸಿದೆ.

ಭ್ರಷ್ಟಾಚಾರ ತಡೆ, ಕಾಳ ಧನ ಪತ್ತೆ, ನಕಲಿ ನೋಟು ಪತ್ತೆ ಹಚ್ಚಿ ಉಗ್ರಗಾಮಿ ಚಟುವಟಿಕೆಗಳಿಗೆ ಕಡಿವಾಣ ಹಾಗೂ ದೇಶವನ್ನು ನಗದು-ರಹಿತವಾಗಿ ರೂಪಿಸುವ ಗುರಿಯೊಂದಿಗೆ ಕೇಂದ್ರವು ನವೆಂಬರ್ 8ರಂದು 500 ರೂ. ಹಾಗೂ 1000 ರೂ. ಹಳೆಯ ನೋಟುಗಳನ್ನು ದಿಢೀರ್ ನಿಷೇಧಿಸಿ, ಕಪ್ಪು ಹಣವನ್ನು ಬಿಳಿಯಾಗಿಸಲು ನಾಗರಿಕರಿಗೆ ಅವಕಾಶ ಕೊಟ್ಟಿತ್ತು.

English Summary: Finance Minister Arun Jaitley today announced several measures to promote digital payments, including a 0.75 percent discount for those who pay for petrol and diesel using digital mode.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ