Please enable javascript.Swami Jagadatmananda,'ಬದುಕಲು ಕಲಿಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದಜಿ ಇನ್ನಿಲ್ಲ - learn to live author swami jagadatmananda dead - Vijay Karnataka

'ಬದುಕಲು ಕಲಿಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದಜಿ ಇನ್ನಿಲ್ಲ

Vijaya Karnataka Web | 15 Nov 2018, 9:55 pm
Subscribe

ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿ ಸ್ವಾಮಿ ಜಗದಾತ್ಮಾನಂದಜಿ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

6cd19545-0316-4879-81da-b51309f46da3
ಮೈಸೂರು: 'ಬದುಕಲು ಕಲಿಯಿರಿ' ಖ್ಯಾತಿಯ ಜಗದಾತ್ಮಾನಂದಜಿ ವಿಧಿವಶರಾದರು. ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಜಗದಾತ್ಮಾನಂದ ಜೀ ಅವರಿಗೆ 90 ವರ್ಷ ವಾಗಿತ್ತು. ಇವರು 9 ಭಾಷೆಗಳಿಗೆ ಭಾಷಾಂತರವಾಗಿರುವ 'ಬದುಕಲು ಕಲಿಯಿರಿ' ಕೃತಿ ರಚಿಸಿ ಖ್ಯಾತರಾಗಿದ್ದರು. ಈ ಕೃತಿಯ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ಸ್ವಾಮಿ ಜಗದಾತ್ಮಾನಂದಜಿ

ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ 'ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯಿತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಯ್ತು. ಒಟ್ಟು 78,000 ಮಾರಾಟವಾಗಿವೆ.

ಇವುಗಳ ಮೂರು ಪರಿಷ್ಕೃತ ಸಂಯುಕ್ತ ಆವೃತ್ತಿಗಳು ಪ್ರಕಟವಾಗಿವೆ. ಮತ್ತೆ 20,000 ಪ್ರತಿಗಳು ಮಾರಾಟವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ. ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ